Overview
Poornaprajna College, popularly known as PPC, is situated in a vast green campus at the heart of Udupi city. It is at a short distance of 1 KM from Udupi Bus Stand, 4 KMs from Udupi Railway Station and about 45 KMs from Mangalore Air Port.
Poornaprajna College is one of the educational institutions run by Udupi Sri Admar Mutt Education Council formerly headed by H. H. Sri Sri Vibudhesha Theertha Swamiji of Sri Admar Mutt. Now, the Council is functioning under the leadership of H. H. Sri Sri Vishwapriya Theertha Swamiji of Sri Admar Mutt.
Poornaprajna College was founded in 1960 by the Swamijis of eight Mathas of Udupi. But, in February 1962, with a view to streamline the day-to-day working of the institution, its maintenance and governance was handed over to Admar Matha Education Council, a registered society functioning under the leadership of H. H. Sri Sri Vibudhesha Theertha Swamiji of Admar Matha. Now, the Council is functioning under the leadership of H. H. Sri Sri Vishwapriya Theertha Swamiji of Sri Admar Matha. It has now been handed over to H.H. Sri Sri Eeshapriya Theertha Swamiji.
Initially, the College provided courses in Arts and Commerce streams. In 1963, Science subjects were introduced at the Pre-University level. Two years later, Science stream was started at the degree level. Ten years later, in 1975, Management studies were introduced at the degree level. In 2001, the Pre-University courses were detached from the College and transferred to the newly established Poornaprajna Unaided Pre-University College. In the year 2015 M.Sc. and M.Com. courses were started. In its early days, the College had the privilege of having eminent scholars and writers like Prof. V.M. Inamdar, Dr. Shankar Mokasi Punekar, Prof. Gopalakrishna Adiga and Dr. P. Narayana Rao as its Principals. After these titans, the tradition was continued by able administrators such as Prof. K.G. Tantry, Prof. Sripathi Upadhya, Prof. H. Shivarama Shetty, Prof. Sudhakar Rao, Prof. M. Subrahmanya, Prof. N. B. Dixit, Dr. S. L. Karnik, Prof. A. K. Halapet, Dr. N.A. Madyastha, Prof. S. Subhashchandra and Prof. Rajmohan , Prof.K.Sadashiva Rao, Dr B. Jagadeesh Shetty, Dr. A.P. Bhat, Dr. Raghavendra A. Presently Dr. Ramu L is heading the institution.
The year 2009-10 being the 50th year, was celebrated as the Golden Jubilee Year. To commemorate the golden jubilee year celebration, an indoor stadium complex was constructed.
NAAC Peer Team visited the college on 29 & 30 Septmber 2022 for reassesment and re-acreditation. College was re-accredited by NAAC with Grade 'A+' (3.27 CGPA) for a further period of 5 years from 11-10-2022
Our college has been conferred the "Award of Excellence" by Udupi Chamber of Commerce & Industry on 10-06-2012 for being the best college in Udupi district in the category of "Advanced Eduction" for the year 2011.
ಅವಲೋಕನ
ಪಿಪಿಸಿ ಎಂದೇ ಜನಪ್ರಿಯವಾಗಿರುವ ಪೂರ್ಣಪ್ರಜ್ಞ ಕಾಲೇಜು, ಉಡುಪಿ ನಗರದ ಹೃದಯಭಾಗದಲ್ಲಿರುವ ಅಬ್ಜಾರಣ್ಯವೆಂಬ ವಿಶಾಲ ಹಸಿರು ಆವರಣದಲ್ಲಿದೆ. ಕಾಲೇಜು ಉಡುಪಿ ಬಸ್ ನಿಲ್ದಾಣದಿಂದ 1 ಕಿ.ಮೀ, ಉಡುಪಿ ರೈಲು ನಿಲ್ದಾಣದಿಂದ 4 ಕಿ.ಮೀ ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ 45 ಕಿ.ಮೀ ದೂರದಲ್ಲಿದೆ.
ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಬುಧೇಶತೀರ್ಥ ಸ್ವಾಮೀಜಿಯವರ ನೇತ್ರತ್ವದಲ್ಲಿ ಆರಂಭಿಸಲಾದ "ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ" ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಪೂರ್ಣಪ್ರಜ್ಞ ಕಾಲೇಜು ಒಂದು. ಪ್ರಸ್ತುತ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
1960 ರಲ್ಲಿ ಉಡುಪಿಯ ಅಷ್ಟಮಠಗಳ ಪೀಠಾಧಿಪತಿಗಳು ಸ್ಥಾಪಿಸಿದ ಪೂರ್ಣಪ್ರಜ್ಞ ಕಾಲೇಜನ್ನು ದೈನಂದಿನ ಸುಗಮ ನಿರ್ವಹಣೆಗಾಗಿ 1962 ರಲ್ಲಿ ಶ್ರೀ ಶ್ರೀ ವಿಬುಧೇಶತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನೋಂದಾಯಿಸಲ್ಪಟ್ಟ 'ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಗೆ' ವಹಿಸಲಾಯಿತು. ಪ್ರಸ್ತುತ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರು ಸಂಸ್ಥೆಯ ಅಧ್ಯಕ್ಷರಾಗಿರುವರು.
ಆರಂಭದಲ್ಲಿ ಕಾಲೇಜು ಕಲೆ ಮತ್ತು ವಾಣಿಜ್ಯ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ನೀಡುತ್ತಿತ್ತು. 1963 ರಲ್ಲಿ ವಿಜ್ಞಾನ ವಿಷಯಗಳನ್ನು ಪದವಿ ಪೂರ್ವ ಮಟ್ಟದಲ್ಲಿ ಪರಿಚಯಿಸಲಾಯಿತು. ಎರಡು ವರ್ಷಗಳ ನಂತರ ಪದವಿಯಲ್ಲಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಯಿತು. ಹತ್ತು ವರ್ಷಗಳ ನಂತರ 1975 ರಲ್ಲಿ ಆಡಳಿತ ಅಧ್ಯಯನ ಪದವಿಯನ್ನು ಪರಿಚಯಿಸಲಾಯಿತು. 2001 ರಲ್ಲಿ ಪದವಿಪೂರ್ವ ಶಿಕ್ಷಣವು ಪದವಿಯಿಂದ ಬೇರ್ಪಟ್ಟು ಅನುದಾನ ರಹಿತವಾಗಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ನೂತನವಾಗಿ ಸಂಸ್ಥಾಪಿಸಲ್ಪಟಿತು . ಪೂರ್ಣಪ್ರಜ್ಞ ಕಾಲೇಜಿನ ಆರಂಭಿಕ ದಿನಗಳಲ್ಲಿ ವಿ. ಎಂ. ಇನಾಮ್ದಾರ್, ಡಾ. ಶಂಕರ ಮೊಕಾಶಿ ಪುಣೇಕರ್, ಪ್ರೊ. ಗೋಪಾಲಕೃಷ್ಣ ಅಡಿಗ, ಡಾ. ಪಿ. ನಾರಾಯಣರಾವ್ ಮೊದಲಾದ ಪ್ರಖ್ಯಾತ ವಿದ್ವಾಂಸರು ಹಾಗೂ ಬರಹಗಾರರು ಪ್ರಾಂಶುಪಾಲರಾಗಿ ರಾರಾಜಿಸಿದ್ದರು.
ಈ ಪರಂಪರೆಯಲ್ಲಿ ಪ್ರೊ. ಕೆ.ಜಿ. ತಂತ್ರಿ, ಪ್ರೊ. ಶ್ರೀಪತಿ ಉಪಾಧ್ಯಾಯ, ಪ್ರೊ. ಶಿವರಾಮಶೆಟ್ಟಿ, ಪ್ರೊ. ಸುಧಾಕರ್ ರಾವ್, ಪ್ರೊ. ಸುಬ್ರಮಣ್ಯ, ಪ್ರೊ. ಎಂ.ವಿ. ದೀಕ್ಷಿತ್, ಡಾ. ಎಸ್. ಎಲ್. ಕಾರ್ನಿಕ್, ಪ್ರೊ. ಎ.ಕೆ. ಹಳೆಪೇಟೆ, ಡಾ. ಎನ್.ಎ. ಮಧ್ಯಸ್ಥ, ಪ್ರೊ. ಎಸ್. ಸುಭಾಶ್ಚಂದ್ರ, ಪ್ರೊ. ರಾಜಮೋಹನ್, ಪ್ರೊ. ಕೆ. ಸದಾಶಿವ ರಾವ್, ಡಾ. ಬಿ. ಜಗದೀಶ್ ಶೆಟ್ಟಿ, ಡಾ. ಎ. ಪಿ. ಭಟ್ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ ಡಾ. ರಾಘವೇಂದ್ರ ಎ. ಇವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2009-10 ರಲ್ಲಿ ಸುವರ್ಣ ಮಹೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ಒಳಾಂಗಣ ಕ್ರೀಡಾಂಗಣ ಸಂಕೀರ್ಣ ನಿರ್ಮಿಸಲಾಗಿದೆ.
ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ (NAAC) 2022 ಸೆಪ್ಟೆಂಬರ್ 29,30 ರಂದು ಮರು ಮೌಲ್ಯಾಂಕನಕ್ಕಾಗಿ ಸಂಸ್ಥೆಯನ್ನು ಭೇಟಿ ಮಾಡಿ 11-10-2022 ರಿಂದ ಐದು ವರ್ಷಗಳ ಅವಧಿಗೆ ("A+") ಗ್ರೇಡ್ ನೊಂದಿಗೆ (3.27 ಸಿ. ಜಿ. ಪಿ. ಎ) ಮರು ಮಾನ್ಯತೆ ನೀಡಿದೆ.
'ಶ್ರೇಷ್ಠ ಶಿಕ್ಷಣ' ವಿಭಾಗದಲ್ಲಿ ಉಡುಪಿ ಜಿಲ್ಲೆಯ ಅತ್ಯುತ್ತಮ ಕಾಲೇಜು ಎಂದು ಉಡುಪಿಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ನಮ್ಮ ಕಾಲೇಜಿಗೆ 2011 ರ ಸಾಲಿನ 'ಅವಾರ್ಡ್ ಆಫ್ ಎಕ್ಸಲೆನ್ಸ್ 'ಪ್ರಶಸ್ತಿ ನೀಡಿ ಗೌರವಿಸಿದೆ.